ನವದೆಹಲಿ: ಯುಎಇಯಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2020 ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಪ್ರತಿಷ್ಠಿತ ಆರೆಂಜ್ ಕ್ಯಾಪ್ ವಿಜೇತರಾಗಿದ್ದಾರೆ.14 ಪಂದ್ಯಗಳಲ್ಲಿ ಸರಾಸರಿ 55.83 ಮತ್ತು ಸ್ಟ್ರೈಕ್ ರೇಟ್ 129.34. ನೊಂದಿಗೆ ಅವರು ಒಟ್ಟು  670 ರನ್ ಗಳಿಸಿದ್ದಾರೆ.


WATCH: ಧೋನಿಯ ವೇಗದ ವಿಕೆಟ್ ಕೀಪಿಂಗ್ ನೆನಪಿಸಿದ ಕನ್ನಡಿಗ ಕೆ.ಎಲ್ ರಾಹುಲ್ ...!


COMMERCIAL BREAK
SCROLL TO CONTINUE READING

ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ತಂಡವು ಆರಂಭದಲ್ಲಿ ಪಂದ್ಯಗಳನ್ನು ಗೆಲ್ಲುವಲ್ಲಿ ವಿಫಲರಾಗಿದ್ದರೂ ತದನಂತರ ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಗೆ ರೋಚಕ ತಿರುವು ನೀಡಿತು.ಪಂಜಾಬ್ ತಂಡವು ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ 12 ಅಂಕಗಳೊಂದಿಗೆ 6 ನೇ ಸ್ಥಾನದಲ್ಲಿದೆ. ಆದರೆ ರನ್ ಗಳಿಕೆಯ ವಿಚಾರದಲ್ಲಿ ಯಾರೂ ಕೂಡ ರಾಹುಲ್ ದಾಖಲೆಯನ್ನು ಮುರಿದಿಲ್ಲ, ಅವರಿಗೆ ಅತ್ಯಂತ ಹತ್ತಿರವಾದ ಬ್ಯಾಟ್ಸ್‌ಮನ್ ದೆಹಲಿ ಕ್ಯಾಪಿಟಲ್ಸ್ ಶಿಖರ್ ಧವನ್ ಈ ಋತುವಿನಲ್ಲಿ 600 ರನ್ ದಾಟಿದ ಮತ್ತೊಬ್ಬ ಆಟಗಾರನಾಗಿದ್ದಾನೆ.


ಈ ಆಟಗಾರ ಟೆಸ್ಟ್ ನಲ್ಲಿ 50 ಎಸೆತದಲ್ಲಿ 100 ರನ್ ಗಳಿಸಬಹುದು ಎಂದ ಗೌತಮ್ ಗಂಭೀರ್ !


ಆದರೆ ಧವನ್ ಫೈನಲ್‌ನಲ್ಲಿ ಮಿಂಚಲು ವಿಫಲರಾದರು,13 ಎಸೆತಗಳಲ್ಲಿ ಕೇವಲ 15 ರನ್ ಗಳಿಸಿದರು.ಧವನ್ 17 ಪಂದ್ಯಗಳಲ್ಲಿ 44.14 ಸರಾಸರಿಯಲ್ಲಿ 618 ರನ್ ಮತ್ತು 144.73 ಸ್ಟ್ರೈಕ್ ರೇಟ್ ಗಳಿಸಿದ್ದಾರೆ.ಸನ್‌ರೈಸರ್ಸ್ ಹೈದರಾಬಾದ್ ನಾಯಕ ಡೇವಿಡ್ ವಾರ್ನರ್ (16 ಪಂದ್ಯಗಳಲ್ಲಿ 548 ರನ್), ದೆಹಲಿ ಕ್ಯಾಪಿಟಲ್ಸ್ ನಾಯಕ ಶ್ರೇಯಸ್ ಅಯ್ಯರ್ (17 ಪಂದ್ಯಗಳಲ್ಲಿ 519 ರನ್) ಮತ್ತು ಕ್ವಿಂಟನ್ ಡಿ ಕಾಕ್ (16 ಪಂದ್ಯಗಳಲ್ಲಿ 503 ರನ್) ಈ ಪಟ್ಟಿಯಲ್ಲಿ ಮೊದಲ ಐದು ಸ್ಥಾನಗಳಲ್ಲಿದ್ದಾರೆ.


ಏತನ್ಮಧ್ಯೆ, ದುಬೈನಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದ ಮುಂಬೈ ಇಂಡಿಯನ್ಸ್ ಐದನೇ ಐಪಿಎಲ್ ಪ್ರಶಸ್ತಿಯನ್ನುತನ್ನದಾಗಿಸಿಕೊಂಡಿತು.